
ಲೈವ್ ಸುದ್ದಿ.ಕಾಂ|ಶಿವಮೊಗ್ಗ
ಎಸ್.ಎಸ್.ಎಲ್.ಸಿ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಿದ್ದು ಯಾವುದೇ ಡಿಬಾರ್ ಅಥವಾ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲವಾದರೂ ಸಹ ಪರೀಕ್ಷೆಗೆ ಗೈರು ಹಾಜರಿಯಾಗಿರುವುದು ತಿಳಿದು ಬಂದಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಅಧಿಕಾರಿ ಮಚ್ಛಾಡೋ ಲೈವ್ ಸುದ್ದಿ.ಕಾಂ ನೊಂದಿಗೆ ಮಾತನಾಡಿ ಇಂದು ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆ ನಡೆದಿದ್ದು ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿಸಿದರು.
ಆದರೆ, ಪರೀಕ್ಷೆಗೆ ನೋಂದಣಿಯಾದ ವಿದ್ಯಾರ್ಥಿಗಳು 23,558ಗಳಿದ್ದು, ಇದರಲ್ಲಿ ಇಂದು ಹಾಜರಾದವರು 22,743 ವಿದ್ಯಾರ್ಥಿಗಳು ಮಾತ್ರ, ಒಟ್ಟು 815 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದರು.