ಗೊಂದಲವೆಂದರೆ ಸರ್ಕಾರ ಬೀಳುತ್ತೆ ಅಂತ ಅಲ್ಲ-ಬಿಎಸ್ ವೈ

ಗೊಂದಲವೆಂದರೆ ಸರ್ಕಾರ ಬೀಳುತ್ತೆ ಅಂತ ಅಲ್ಲ-ಬಿಎಸ್ ವೈ

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಫಲಿತಾಂಶ ಹೊರಗೆ ಬಿದ್ದಮೇಲೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪ ತಿಳಿಸಿದರು.

ಅವರು ಶಿಕಾರಿಪುರದ ತಾಲೂಕು ಕಛೇರಿಯ ಆವರದಲ್ಲಿ ಮತಚಲಾವಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಉಪಚುನಾವಣೆಯ ನಂತರ ಸರ್ಕಾರದಲ್ಲಿ ಬದಲಾವಣೆಯಾಗಲಿದೆ ಎಂಬ ಅಂಶಕ್ಕೆ ಮತ್ತೆ ತಾವುಗಳು ಅಂಟಿಕೊಳ್ಳುತ್ತೀರ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್.ಯಡ್ಡಿಯೂರಪ್ಪ ಉಪಚುನಾವಣೆಯ ಫಲಿತಾಂಶ ಹೊರಗೆ ಬಂದಮೇಲೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಹೆಚ್ಚಾಗಲಿದೆ ಎಂದರು.

ಗೊಂದಲಹೆಚ್ಚಾಗಲಿದೆ ಎಂದರೆ ಸರ್ಕಾರ ಬೀಳಲಿದೆಯಾ ಎಂಬ ಮಾದ್ಯಮಗಳ ಮರುಪ್ರಶ್ನೆಗೆ ಗೊಂದಲ ಹೆಚ್ಚಾಗಲಿದೆ ಎಂದರೆ ಸರ್ಕಾರ ಬೀಳಲಿದೆ ಎಂದು ಅಲ್ಲ. ಎರಡೂ ಪಕ್ಷದಲ್ಲಿನ ಕಚ್ಚಾಟ ಹೆಚ್ಚಾಗಲಿದೆ ಎಂದರು.

ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರರವರ ಗೆಲವು ನಿಶ್ಚಿತ, ಬಳ್ಳಾರಿಯಲ್ಲಿ ಶಾಂತರವರ ಗೆಲವು ಸಹ ನಿಶ್ಚಿತವಾಗಿದೆ. ಅದರಂತೆ ಮಂಡ್ಯದಲ್ಲಿಯೂ ಗೆಲುವಿನ ನಿರೀಕ್ಷೆ ಇದೆ ಎಂದ ಬಿಎಸ್ ವೈ ಜಮಖಂಡಿ ವಿಧಾನ ಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಶ್ರೀಕಾಂತ್ ಕುಲ್ಕರ್ಣಿ ಗೆಲವು ಸಾಧಿಸಲಿದ್ದಾರೆ ಎಂದರು.

ಎಂ.ಪಿ.ರವೀಂದ್ರರವರ ಸಾವಿಗೆ ಬಿಎಸ್ ವೈ ಸಂತಾಪ

ಹರಪ್ಪನಹಳ್ಳಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರು ಇಂದು ಬೆಳಿಗ್ಗೆ ಅಂಗಾಂಗ ವೈಫಲ್ಯದಿಂದ ಸಾವು ಕಂಡಿದ್ದು ಇವರ ಸಾವಿಗೆ ಬಿಎಸ್ ವೈಸಂತಾಪ ಸೂಚಿಸಿದರು. 

ರವೀಂದ್ರ ಅವರ ಸಾವು ನನಗೆ ದಿಗ್ಬ್ರಮೆ ಉಂಟುಮಾಡಿದೆ ಎಂದ ಬಿಎಸ್ ವೈ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.

421