ಬೈಕ್ ಸವಾರರಿಗೆ ಸಿಹಿ ಸುದ್ದಿ: ಹಾರ್ಲಿ ಡೇವಿಡ್ಸನ್ ಬೈಕ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ

ಹಾರ್ಲಿ ಡೇವಿಡ್ಸನ್ ಬೈಕ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ
 
 
ಲೈವ್ ಸುದ್ದಿ | ಶಿವಮೊಗ್ಗ
 
 ನವದೆಹಲಿ: ಹಾರ್ಲಿ ಡೇವಿಡ್ಸನ್ ಇದೀಗ ಭಾರತದಲ್ಲಿ ಸಾಫ್ಟೈಲ್ ರೇಂಜ್ ಮಾದರಿಯ ಬೈಕ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಬೈಕ್ ನ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿರುವುದಾಗಿ ಹಾರ್ಲಿ ಡೇವಿಡ್ಸನ್ ಇಂಡಿಯಾ ತಿಳಿಸಿದೆ. 
 
ದೇಶದಲ್ಲಿನ ಯೂನಿಟ್ ಗಳಿಂದ ಸಂಪೂರ್ಣವಾಗಿ ನಿರ್ಮಾಣವಾಗಿರುವ ಬೈಕ್ ಗಳನ್ನು ಆಮದು ಮಾಡಿಕೊಂಡಿದ್ದು ಈ   ಬೈಕ್ ಗಳ ಕಸ್ಟಮ್ಸ್ ಸುಂಕ ಕಡಿಮೆ ಮಾಡಲಾಗಿದೆ. ಒಟ್ಟಾರೆ 3,73 ಲಕ್ಷ ರುಪಾಯಿ ಕಡಿಮೆಯಾಗಿದೆ ಎಂದು ಹಾರ್ಲಿ ಡೇವಿಡ್ಸನ್ ಇಂಡಿಯಾ ಹೇಳಿದೆ. 
  
ಹಾರ್ಲಿ ಡೇವಿಡ್ಸನ್ ಫ್ಲಾಗ್ ಶಿಪ್ ಮಾದರಿಯ ಬೈಕ್ ತರ 53.72 ಲಕ್ಷ ಇದ್ದು ಇದೀಗ 49.99 ಲಕ್ಷ ರುಪಾಯಿಗೆ ದೊರೆಯಲಿದೆ. ಇನ್ನು ಟೂರಿಂಗ್ ರೇಂಜ್ ರೋಡ್ ಕಿಂಗ್ ಮಾದರಿ ಬೈಕ್ 28.37 ಲಕ್ಷ ಇದು ಇದೀಗ 24.99 ಲಕ್ಷ ರುಪಾಯಿಗೆ ಕಡಿಮೆಯಾಗಿದೆ. ದಿ ಸ್ಟ್ರೀಟ್ ಗ್ಲೀಡ್ ಬೈಕ್ ಬೆಲೆ 33.50 ಲಕ್ಷ ರುಪಾಯಿ ಇದ್ದು ಆ ಬೈಕ್ ಬೆಲೆಯೂ 29.99 ಲಕ್ಷ ರುಪಾಯಿಗೆ ಕಡಿಮೆಯಾಗಿದೆ. 
 
ಹಾರ್ಲಿ ಡೇವಿಡ್ಸನ್  ಸಾಫ್ಟೈಲ್ ಡಿಲೆಕ್ಸ್ ಬೈಕ್ ಸೇರಿದಂತೆ ಹಲವು ಬೈಕ್ ಮಾದರಿಗಳನ್ನು ಹಾರ್ಲಿ ಡೇವಿಡ್ಸನ್ ಇಂಡಿಯಾ ಮಾರುಕಟ್ಟೆಗೆ ಪರಿಚಯಿಸಿದೆ. ಸಾಫ್ಟೈಲ್ ಡಿಲೆಕ್ಸ್ ಬೈಕ್ 17.99 ಲಕ್ಷ ರುಪಾಯಿ ಮತ್ತು ಲೋ ರೈಡರ್ ಬೆಲೆ 12.99 ಲಕ್ಷ ರುಪಾಯಿ ಇದೆ.
636