ರಣಜಿ ಕ್ರಿಕೆಟ್-ಕರ್ನಾಟಕ ತಂಡ 9 ಕ್ಕೆ 208

ರಣಜಿ ಕ್ರಿಕೆಟ್-ಕರ್ನಾಟಕ ತಂಡ 9 ಕ್ಕೆ 208

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ಶಿವಮೊಗ್ಗದ ನವುಲೆ ಕೆ.ಎಸ್.ಸಿ.ಎ. ಮೈದಾನದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕರ್ನಾಟಕ ಮತ್ತು ರೈಲ್ವೆ ನಡುವಣಾ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ 9 ವಿಕೆಟ್ ಪತನಕ್ಕೆ 208 ರನ್ ಗಳಿಸಿ ಸಂಕಷ್ಠದ ಪರಿಸ್ಥಿತಿಯಲ್ಲಿದೆ.

ಮೊದಲ ದಿನವೇ 9 ವಿಕೆಟ್ ಪತನ ಕಂಡ ಕರ್ನಾಟಕ ತಂಡ.

ದಿನದ ಅಂತ್ಯಕ್ಕೆ ಕರ್ನಾಟಕ ತಂಡ 89 ಓವರ್ ನಲ್ಲಿ 9 ವಿಕೆಟ್ ಪತನಕ್ಕೆ 208 ರನ್ ಕೂಡಿಹಾಕಿದೆ. ಕರ್ನಾಟಕ ಪರ ಸಿದ್ಧಾರ್ಥ್ 185 ಬಾಲ್ ಗೆ 69, ನಿಶ್ಚಲ್ 172 ಬಾಲ್ ಗೆ 52 ರನ್ ಗಳಿಸಿ ಅರ್ಧ ಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೈಲ್ವೆ ತಂಡದ ಬೌಲರ್ ಗಳಲ್ಲಿ ಅವಿನಾಶ್ ಯಾದವ್ 43 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಕರಣ್ ಠಾಕೂರ್ 41 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. ಅಮಿತ್ ಮಿಶ್ರಾ 57 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡದ ಬ್ಯಾಟ್ಸ್ ಮ್ಯಾನ್ ಗಳಾದ ಪ್ರಸಿದ್ಧ ಕೃಷ್ಣ (2), ಶರತ್ (27) ಸ್ಕ್ರೀಸ್ ನಲ್ಲಿದ್ದಾರೆ.

599