ಶಿವಮೊಗ್ಗದಲ್ಲಿಕರ್ನಾಟಕ ಮತ್ತು ರೈಲ್ವೆ ತಂಡಗಳ ನಡುವೆ ರಣಜಿ ಕ್ರಿಕೆಟ್ ಪಂದ್ಯ

ಶಿವಮೊಗ್ಗದಲ್ಲಿಕರ್ನಾಟಕ ಮತ್ತು ರೈಲ್ವೆ ತಂಡಗಳ ನಡುವೆ ರಣಜಿ ಕ್ರಿಕೆಟ್ ಪಂದ್ಯ

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ಶಿವಮೊಗ್ಗ ನಗರದ ಕೆಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಡಿ.22 ರಿಂದ ಡಿ.25 ರವರೆಗೆ ಕರ್ನಾಟಕ ಕ್ರಿಕೆಟ್ ತಂಡ ಮತ್ತು ರೈಲ್ವೆ ಕ್ರಿಕೆಟ್ ತಂಡಗಳ ನಡುವೆ ರಣಜಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ರೈಲ್ವೆ ಕ್ರಿಕೆಟ್ ತಂಡದಲ್ಲಿ ಯಾರಾರು?

ರೈಲ್ವೆ ಕ್ರಿಕೆಟ್ ತಂಡ ಐಪಿಎಲ್ ಕ್ರಿಕೆಟ್ ನಲ್ಲಿ ಆಡಿದ ಪ್ರಮುಖ ಆಟಗಾರರರನ್ನ ಒಳಗೊಂಡಿದೆ. ನಿತಿನ್ ಬಿಲ್ಲೆ, ಪ್ರೈಮ್ ಸಿಂಗ್, ಮಹೇಶ್ ರಾವತ್, ಫಯಾಜ್ ಅಹ್ಮದ್, ಮನಿಷ್ ರಾವ್, ಸೌರಬ್ ವಕಾಸ್ಕರ್, ಅಭಿನವ್ ಧೀಕ್ಷಿತ್, ಪ್ರಶಾಂತ್ ಗುಪ್ತ, ಪ್ರಮುಖ ಬ್ಯಾಟ್ಸ್ ಮಾನ್ ಗಳು

ಅನುರೀತ್ ಸಿಂಗ್, ಮಧುರ್ ಖತ್ರಿ, ಕರನ್ ಠಾಕೂರ್, ಅವಿನಾಶ್ ಯಾದವ್, ಮಂಜೀತ್ ಸಿಂಗ್, ಶಿವಕಾಂತ್ ಶುಕ್ಲಾ, ಎಸಿಪಿ ಮಿಶ್ರಾ, ಪ್ರಮುಖ ಬೌಲರ್ ಗಳಾಗಿದ್ದಾರೆ. ಅಲ್ ರೌಂಡರ್ ಆಗಿ ಅರಿಂದಮ್ ಗೋಷ್, ಹರ್ಷ ತ್ಯಾಗಿ ಅವರು ತಂಡದ ಅಲ್ ರೌಂಡ್ ಆಟಗಾರಾಗಿದ್ದಾರೆ.

ಕರ್ನಾಟಕ ತಂಡ ಹೀಗಿದೆ.

ಕರುನ್ ನಯರ್, ರವಿಕುಮಾರ್ ಸಮರ್ಥ್, ಕೃಷ್ಣ ಮೂರ್ತಿ ಸಿದ್ದಾರ್ಥ್, ಡೆಗಾ ನಿಶ್ಚಲ್, ಮಿರ್ ಕುನೈನ್ ಅಬ್ಬಾಸ್, ಲಿಯಾನ್ ಖಾನ್, ದೇವ್ ದತ್ತ ಪಡಿಕಲ್, ಮಯಾಂಕ್ ಅಗ್ರವಾಲ್ ತಂಡದ ಪ್ರಮುಖ ಬ್ಯಾಟ್ಸ ಮ್ಯಾನ್ ಆಗಿ ಆಡಲಿದ್ದಾರೆ.

ಬೌಲರ್ ವಿಭಾಗದಲ್ಲಿ ನಾಯಕ ವಿನಯ್ ಕುಮಾರ್, ಜಗದೀಶ್ ಸುಚಿತ್, ಪ್ರಸೀದ್ ಕೃಷ್ಣ, ರೋನಿತ್ ಮೋರೆ, ಅಭಿಮನ್ಯು ಮಿಥುನ್, ಪ್ರತೀಕ್ ಜೈನ್ ರಿದ್ದಾರೆ.

ಶ್ರೇಯಸ್ ಗೋಪಾಲ್, ಸ್ಟುವರ್ಟ್ ಬಿನ್ನಿ, ಪವನ್ ದೇಶ್ ಪಾಂಡೆ, ಶಿಶಿರ್ ಭಾವನೆ ಆಲ್ ರೌಂಡರ್ ಆಗಿ ತಂಡದಲ್ಲಿ ಆಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ಇಲ್ಲದೆ ಬಂದ ಕೆಸಿಎ

ಡಿ.22 ರಿಂದ 25 ರವರೆಗೆ ನಡೆಯುವ ರಣಜಿ ಕ್ರಿಕೆಟ್ ಪಂದ್ಯಾವಳಿಯ ಬಗ್ಗೆ ಕೆಸಿಎ ಇಂದು ಸುದ್ದಿಗೋಷ್ಠಿ ನಡೆಸಿತು. ಆದರೆ ಸುದ್ದಿಗೋಷ್ಠಿ ನಡೆಸಿದ ಕೆಸಿಎ ಬಳಿ ರೈಲ್ವೆ ಕ್ರಿಕೆಟ್ ತಂಡದ ನಾಯಕ ಯಾರು ಎಂಬ ಮಾಹಿತಿ ನೀಡಲಿಲ್ಲ

ಜೊತೆಗೆ ಸುದ್ದಿಗೋಷ್ಠಿಯಲ್ಲಿ  ಮಾದ್ಯಮದವರಿಗೆ ನೀಡುವ ಮಾದ್ಯಮ ಪ್ರಕಟಣೆಯ ಪ್ರತಿಯನ್ನೂ ಸರಿಯಾಗಿ ಹಂಚದೆ ಸುದ್ದಿಗೋಷ್ಠಿ ನಡೆಸಲಾಯಿತು. 

 

775