ಶಿವಮೊಗ್ಗದಲ್ಲಿ ನಡೆಯುತ್ತಿರುವ ರಣಜಿ ಪಂದ್ಯ-ಕರ್ನಾಟಕಕ್ಕೆ ಆರಂಭಿಕ ಆಘಾತ

ಶಿವಮೊಗ್ಗದಲ್ಲಿ ನಡೆಯುತ್ತಿರುವ ರಣಜಿ ಪಂದ್ಯ-ಕರ್ನಾಟಕಕ್ಕೆ ಆರಂಭಿಕ ಆಘಾತ

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ಕರ್ನಾಟಕ ಮತ್ತು ರೈಲ್ವೆ ತಂಡದ ನಡುವೆ ಶಿವಮೊಗ್ಗದ ನವುಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಆರಂಭಿಕ ಆಘಾತವಾಗಿದೆ.

ಮೊದಲಿಗೆ ರೈಲ್ವೆ ತಂಡದ ನಾಯಕ ಅರಿಂದಂ ಘೋಷ್ ಟಾಸ್ ಗೆದ್ದು ಕರ್ನಾಟಕ ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಡಲಾಗಿತ್ತು. ಕರ್ನಾಟಕದ ತಂಡದ ಪರ ಬ್ಯಾಟ್ ಮಾಡಲು ಬಂದ ಡಿ.ನಿಶ್ಚಲ್ ಹಾಗೂ ಆರ್.ಸಮರ್ಥ್, 6.3 ಓವರ್ ನಲ್ಲಿ ಅಮಿತ್ ಮಿಶ್ರ ಬೌಲಿಂಗನಲ್ಲಿ ಸೆಕೆಂಡ್ ಸ್ಲಿಪ್ ನಲ್ಲಿದ್ದ ಪ್ರಶಾಂತ್ ಗುಪ್ತನಿಗೆ ಸಮರ್ಥ್  ಓಟ್ ಆದರು.

ಆಗ ಕರ್ನಾಟಕ ತಂಡದ ಮೊತ್ತ 7 ರನ್ ಆಗಿತ್ತು ಸಮರ್ಥ್ ವ್ಯಯಕ್ತಿಕ  3 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾದರು. ಎರಡನೇ ಬ್ಯಾಟ್ಸ್ ಮ್ಯಾನ ಆಗಿ ದೇವದತ್ತ ಪಡಿಕಲ್ ಬಂದರು. ಇವರು ಸಹ ಹೆಚ್ಚು ಹೊತ್ತು ನಿಲ್ಲಲ್ಲ. 1 ರನ್ ಗೆ ಕರಣ್ ಠಾಕೂರ್ ಗೆ ಕೀಪರ್ ಗೆ ಕ್ಯಾಚ್ ನೀಡಿ ಔಟ್ ಆದರು.

ಆಗ ತಂಡದ ಮೊತ್ತ 8 ರನ್ ಆಗಿತ್ತು. ನಂತರ ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಬ್ಯಾಟ್ ಗೆ ಇಳಿದರು. ಆದರೆ ಅವರೂ ಸಹ ಹೆಚ್ಚು ಹೊತ್ತು ಸ್ಕೀಸ್ ನಲ್ಲಿ ನಿಲ್ಲಲಿಲ್ಲ. ಏಳು ಬಾಲಿಗೆ 4 ರನ್ ಗಳಿಸಿ ಓಟ್ ಆಗಿದರು. ಆಗ ತಂಡದ ಮೊತ್ತ 17 ರನ್ ಆಗಿತ್ತು. ಈಗ ಸ್ಕೀಸ್ ನಲ್ಲಿ ಡಿ.ನಿಶ್ಚಲ್( 9)ಮತ್ತು ಕೆ.ವಿ.ಸಿದ್ದಾರ್ಥ್(14) ಇದ್ದು 23ರನ್ ಜೊತೆಯಾಟವಾಡುತ್ತಿದ್ದಾರೆ.

693