ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: 5 ದಿನದಲ್ಲಿ 4.30 ಲಕ್ಷ ಕೋಟಿ ರು. ನಷ್ಟ

5 ದಿನದಲ್ಲಿ 4.30 ಲಕ್ಷ ಕೋಟಿ ರು. ನಷ್ಟ
 
ಲೈವ್ ಸುದ್ದಿ | ಶಿವಮೊಗ್ಗ
 
ಮುಂಬೈ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮೇಲೇರುತ್ತಿದ್ದ ಸೆನ್ಸೆಕ್ಸ್‌ ಈಗ ಕೆಳಮುಖವಾಗಿದ್ದು, ಸೆನ್ಸೆಕ್ಸ್‌ನ ಈ ಏರಿಳಿತದಿಂದಾಗಿ ಹೂಡಿಕೆದಾರರು ಐದು ದಿನದಲ್ಲಿ ಬರೊಬ್ಬರಿ 4.30 ಲಕ್ಷ ಕೋಟಿ ರುಪಾಯಿ ನಷ್ಟ ಅನುಭವಿಸಿದ್ದಾರೆ.
 
ಹೂಡಿಕೆದಾರರು ಮಂಗಳವಾರ ಒಂದೇ ದಿನವೇ 1.54 ಲಕ್ಷ ಕೋಟಿ ರುಪಾಯಿ ನಷ್ಟ ಅನುಭವಿಸಿದ್ದು, ಮುಂಬೈ ಷೇರು ವಿನಿಮಯ ಮಾರುಕಟ್ಟೆ ಸೆನ್ಸೆಕ್ಸ್‌ ಇಂದಿನ ವಹಿವಾಟಿನಲ್ಲಿ 430 ಅಂಕಗಳ ಕುಸಿತ ಕಂಡಿದೆ. ಇದು ಕಳೆದ ಮೂರು ತಿಂಗಳಲ್ಲೇ ಭಾರಿ ಕುಸಿತವಾಗಿದೆ.
 
ಇದರ ಒಟ್ಟಾರೆ ಪರಿಣಾಮ ಹೂಡಿಕೆದಾರರ ಮೇಲೆ ಬಿದ್ದಿದೆ. ಇದರಿಂದ ಹೂಡಿಕೆದಾರರು ಕೋಟ್ಯಂತರ ರುಪಾಯಿ ನಷ್ಟ ಅನುಭವಿಸಿದ್ದಾರೆ. ಇದರ ಒಟ್ಟಾರೆ ಮೌಲ್ಯ 4.30 ಲಕ್ಷ ಕೋಟಿ ರುಪಾಯಿ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
 
ಇಂದು ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಜಿಗಿತವನ್ನು ದಾಖಲಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಸಂಜೆ ಕೊನೇ ತಾಸಿನ ವಹಿವಾಟಿನಲ್ಲಿ ನಾಟಕೀಯ ಮಾರಾಟ ಒತ್ತಡಕ್ಕೆ ಗುರಿಯಾಗಿ 430 ಅಂಕಗಳ ಭಾರೀ ನಷ್ಟ ಅನುಭವಿಸಿ ದಿನದ ವಹಿವಾಟನ್ನು, ಮೂರು ತಿಂಗಳ ಕನಿಷ್ಠ ಮಟ್ಟವಾಗಿ,  33,317 ಅಂಕಗಳ ಮಟ್ಟಕ್ಕೆ ಕುಸಿದು ಕೊನೆಗೊಳಿಸಿತು.
 
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 109 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 10,249.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

 

897