143 ಕ್ಕೆ ರೈಲ್ವೇಸ್ ತಂಡ ಆಲ್ ಓಟ್-112 ರನ್ ಲೀಡ್ ಪಡೆದ ಕರ್ನಾಟಕ ತಂಡ

143 ಕ್ಕೆ ರೈಲ್ವೇಸ್ ತಂಡ ಆಲ್ ಓಟ್-112 ರನ್ ಲೀಡ್ ಪಡೆದ ಕರ್ನಾಟಕ ತಂಡ

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ಶಿವಮೊಗ್ಗದ ನವುಲೆಯ ಕೆಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ರೈಲ್ವೆ ತಂಡದ ನಡುವಿನ ರಣಜಿ ಕ್ರಿಕೆಟ್ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ ಕರ್ನಾಟಕ  ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ 71 ರನ್  ಮುನ್ನಡೆ

ಎರಡನೇ ದಿನದ ಆರಂಭದಲ್ಲಿ ಮೂರು ಓವರ್ ಗಳನ್ನ ಆಡಿದ ಕರ್ನಾಟಕ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ 214 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ನಂತರ ಬ್ಯಾಟ್ ಮಾಡಿದ ರೈಲ್ವೆ ತಂಡ ಕರ್ನಾಟಕದ ರೋನಿತ್ ಮೋರೆಯ ಕರಾರುವಕ್ಕಾದ ಎಸೆತಕ್ಕೆ 143 ರನ್ ಗಳನ್ನ ಸೇರಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಎರಡನೇ ಇನ್ನಿಂಗ್ಸ್  ಆರಂಭಿಸಿದ  ಕರ್ನಾಟಕ  ತಂಡ ಡಿ.ನಿಶ್ಚಲ್ ಮತ್ತು ಪಡಿಕ್ಕಲ್ ಅವರ ಜೊತೆಯಾಟ ನಡೆಸಿ 41 ರನ್ ಕೂಡಿಹಾಕಿತು.  ಇದರಿಂದ ರೈಲ್ವೆ ತಂಡದ ವಿರುದ್ದ ಕರ್ನಾಟಕ ತಂಡ 112 ರನ್ ಗಳ ಮುನ್ನಡೆ ಪಡೆಯಿತು. ನಿಶ್ಚಲ್ (25/38) ಪಡಿಕ್ಕಲ್ (11/38) ರನ್ ಗಳಿಸಿ ಸ್ಕ್ರೀಸ್ ನಲ್ಲಿದ್ದಾರೆ.

640