214 ಕ್ಕೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡ ಕರ್ನಾಟಕ-56/6 ರೈಲ್ವೆ ತಂಡ

214 ಕ್ಕೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡ ಕರ್ನಾಟಕ-56/6 ರೈಲ್ವೆ ತಂಡ

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ಶಿವಮೊಗ್ಗದ ನವುಲೆಯಲ್ಲಿ ಕೆ.ಎಸ್.ಸಿ.ಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ರೈಲ್ವೇಸ್ ಕ್ರಿಕೆಟ್ ತಂಡದ ರಣಜಿ ಆಟ ಕುತೂಹಲ ಘಟ್ಟ ತಲುಪುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.

ಮೊದಲನೇದಿನದ ಅಂತ್ಯಕ್ಕೆ ಕರ್ನಾಟಕ ತಂಡ 9 ವಿಕೆಟ್ ಕಳೆದುಕೊಂಡು 208 ರನ್ ಕೂಡಿಹಾಕಿತ್ತು. ಎರಡನೇ ದಿನದ ಆರಂಭಕ್ಕೆ ಕರ್ನಾಟಕ 214 ರನ್ ಸೇರಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು.

ತನ್ನ ಮೊದಲನೇ ಇನ್ನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡ ಆರಂಭದ ಆರು ವಿಕೆಟ್ ಕಳೆದುಕೊಂಡು 55 ರನ್ ಕೂಡಿಹಾಕಿದೆ. ಆರಂಭಿಕ ಆಟಗಾರರಾಗಿ ಬಂದ ಪ್ರಶಾಂತ್ ಗುಪ್ತ ಹಾಗೂ ಸೌರವ್ ವಾಕಸ್ಕರ್ ಸ್ಕ್ರೀಸ್ ಗೆ ಇಳಿದಿದ್ದಾರೆ. 

ಕರ್ನಾಟಕ ತಂಡದ 4 ನೇ ಓವರ್ ನಲ್ಲಿ ಅಭಿಮನ್ಯು ಮಿಥುನ್ ಬೌಲಿಂಗ್ ನಲ್ಲಿ ವಾಕಸ್ಕರ್ (4) ಹೊಡೆದು ಕೀಪರ್ ಶರತ್ ಗೆ ಕ್ಯಾಚ್ ಇತ್ತರು. ಎರಡನೇ ಬ್ಯಾಟ್ಸಮನ್ ಆಗಿ ನಿತಿನ್ ಬಿಲ್ಲೆ (1) ಪ್ರಸಿದ್ದ ಕೃಷ್ಣ ರಿಗೆ ಎಲ್.ಬಿ. ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಪ್ರಥಮ ಸಿಂಗ್ (2) ರನ್ ಹೊಡೆದು ಪ್ರಸಿದ್ದ ಕೃಷ್ಣರ ಬೌಲಿಂಗ್ ನಲ್ಲಿ ಸಮರ್ಥಿಗೆ ಕ್ಯಾಚಿತ್ತು ಓಟಾದರು.

ನಾಲ್ಕನೇ ವಿಕೆಟ್ ಬ್ಯಾಟ್ ಮ್ಯಾನ್ ಆಗಿ ಆಗಮಿಸಿದ ರೈಲ್ವೇಸ್ ತಂಡದ ನಾಯಕ ಅರಿಂದಂ ಘೋಷ್ (0) ಹೆಚ್ಚು ಹೊತ್ತು ನಿಲ್ಲಲಿಲ್ಲ, ರೋನಿತ್ ಮೋರೆ ಬೌಲಿಂಗ್ ನಲ್ಲಿ ಸ್ಲಿಪ್ ನಲ್ಲಿದ್ದ ಸಮರ್ಥಗೆ ಕ್ಯಾಚ್ ನೀಡಿ ಡಕ್ ಗೆ ವಿಕೆಟ್ ಒಪ್ಪಿಸಿದರು. ಐದನೇ ವಿಕೆಟ್ ನ್ನ ಪ್ರಶಾಂತ್ ಗುಪ್ತ (35) ರನ್ ಹೊಡೆದು ಅಭಿಮನ್ಯು ಮಿಥಿನ್ ಬೌಲಿಂಗ್ ನಲ್ಲಿ ಸ್ಲಿಪ್ ನಲ್ಲಿ ಕ್ಯಾಚ್ ಇತ್ತು ಓಟ್ ಆದರು. ಆಗ ರೈಲ್ವೆ ತಂಡದ ಮೊತ್ತ (53/5)  ಆಗಿತ್ತು.

55/6 ಸಹೀಂ ಹಸನ್ (2) ಹೊಡೆದು ರೋನಿತ್ ಮೋರೆಗೆ ಬೌಲ್ಡ್ ಆದರು.  ಇದರಿಂದ ರೈಲ್ವೆಸ್ ಕ್ರಿಕೆಟ್ ತಂಡ ಸಂಕಷ್ಠದಲ್ಲಿದ್ದು, ಪಂದ್ಯ ನಿರ್ಣಾಯಕ ಹಂತ ತಲುಪುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ. ಲಂಚ್ ಬ್ರೇಕ್ ಗೆ ರೈಲ್ವೆತಂಡ 56/6 ಸ್ಕೋರ್ ಮಾಡಿತ್ತು.

651