ಲೈವ್ ಸುದ್ದಿ.ಕಾಂ/ಶಿವಮೊಗ್ಗ
ಭದ್ರಾವತಿ ತಾಲೂಕಿನ ಅರೆಬಿಳಚಿ ಗ್ರಾಮದ ನಿಗದಿತ ಪ್ರದೇಶವನ್ನ ಸೀಲ್ ಡೌನ್ ಮಾಡಲಾಗಿದೆ.
ಸೌದಿಯಿಂದ ಬಂದ ಯುವಕನಿಗೆ ಕೊರೋನ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆತನ ಮನೆಯ 100 ಮೀಟರ್ ಆಜುಬಾಜು ಸೀಲ್ ಡೌನ್ ಮಾಡಲಾಗಿದೆ.
ಜೂನ್ 11 ರಂದು ಸೌದಿಯಿಂದ ಮಂಗಳೂರಿಗೆ ಬಂದಿದ್ದ ಯುವಕನಿಗೆ ಕ್ವಾರಂಟೈನ್ ಮಾಡಲಾಗಿತ್ತು. ಮಂಗಳೂರಿನಿಂದ ಅರೆಬಿಳಚಿಗೆ ಹೊರಡುವ ವೇಳೆ ಈತನಿಗೆ ಕೊರೋನ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಎಂದು ವರದಿಬಂದಿತ್ತು.
ಜೂನ್ 20 ರಂದ ಅರೆಬಿಳಚಿಗೆ ಬಂದ ಯುವಕನಿಗೆ ಆರೋಗ್ಯ ಇಲಾಖೆಯವರು 24 ರಂದು ಪರೀಕ್ಷೆಗೆ ಒಳಪಡಿಸಿದ್ದರು. ನಿನ್ನೆ ಕೊರೋನ ಪಾಸಿಟಿವ್ ಎಂದು ವರದಿ ಬಂದ ಬೆನ್ನಲ್ಲೆ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಯುವಕನ ಪ್ರಾಥಮಿಕ ಸಂಪರ್ಕವನ್ನೂ ಪತ್ತೆ ಹಚ್ಚಲಾಗಿದ್ದು ಈತನ ಕುಟುಂಬದ 6 ಜನರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಆತಂಕದಲ್ಲಿ ಖವಾಸಪುರದ ಗ್ರಾಮಸ್ಥರು!
ಖವಾಸಪುರದಲ್ಲಿ ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪಿದ ವೃದ್ಧೆ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದವರಿಗೆ ಕೊರೋನ ಪಾಸಿಟಿವ್ ಭೀತಿ ಎದುರಾಗಿದೆ.
ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಒಟ್ಟು ಒಂಬತ್ತು ಜನರಿಗೆ ಕೊರೋನ ಸೋಂಕು ತಗುಲಿರುವ ಸಾಧ್ಯತೆ ಇದೆ. ಒಂಬತ್ತಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಬಂದರೂ ಆಶ್ಚರ್ಯಪಡುವಂತಿಲ್ಲ.
