ಮತ್ತೆ ಪ್ರಧಾನಿ ಮೋದಿ ಅಧಿಕಾರ ಹಿಡಿಯಲಿದ್ದಾರೆ-ಕೆ.ಪಿ.ನಂಜುಂಡಿ

ಮತ್ತೆ ಪ್ರಧಾನಿ ಮೋದಿ ಅಧಿಕಾರ ಹಿಡಿಯಲಿದ್ದಾರೆ-ಕೆ.ಪಿ.ನಂಜುಂಡಿ

ಲೈವ್ ಸುದ್ದಿ.ಕಾಂ|ಶಿವಮೊಗ್ಗ

ಹಿಂದುಳಿದ ಸಮಾಜದ ನಾಯಕರೇ ಮುಖ್ಯಮಂತ್ರಿ ಆದರೂ ಹಿಂದುಳಿದ ವರ್ಗಕ್ಕೆ ಸೂಕ್ತವಾದ ಸ್ಥಾನಮಾನ ನೀಡುವಲ್ಲಿ ವಿಫಲರಾದ ಹಿನ್ಬಲೆಯಲ್ಲಿ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ತಿಳಿಸಿದರು.

ಅವರು ಬಿಜೆಪಿಯ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ಸಮಾಜವು ರಾಜ್ಯದಲ್ಲಿ ಶೇ.51 ರಷ್ಟು ಜನ ವಾಸಿಸುತ್ತಿದ್ದೇವೆ. ಇವರ ಏಳಿಗೆಗೆ ಬಿ.ಎಸ್.ಯಡ್ಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸೂಕ್ತ ಸ್ಥಾನ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ 1000 ಕೋಟಿ ರೂ. ಅನುದಾನ ನೀಡಲಿದ್ದೇನೆ ಎಂದು ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದರು ಎಂದರು.

ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಹಿಂದುಳಿದ ಸಮಾಜದ ಶ್ರೇಯಸ್ಸಿಗೆ ಶ್ರಮಿಸಲಿದ್ದಾರೆ. ಹಾಗಾಗಿ ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರರನ್ನ ಗೆಲ್ಲಿಸಬೇಕೆಂದರು.

ಎಂಎಲ್ ಸಿ ಆದ ಮೇಲೆ ಸಮಾಜಕ್ಕೆ ತಮ್ಮ ಕೊಡುಗೆ ಏನು?

ತಾವು ಎಂಎಲ್ ಸಿ ಆದಮೇಲೆ ಸಮಾಜಕ್ಕೆ ಕೊಡುಗೆ ಏನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆ.ಪಿ.ನಂಜುಂಡಿ ನಾನು ಕೇವಲ ವಿಶ್ವಕರ್ಮಕ್ಕೆ ಸೀಮಿತವಾಗಿಲ್ಲ. 103 ಹಿಂದುಳಿದ ಜಾತಿಗೆ ನಾನು ಪ್ರತಿನಿಧಿಸುತ್ತೇನೆ ಅಷ್ಟೆ. ಆದರೆ ರಾಜಕೀಯ ಶಕ್ತಿ ನೀಡಲು ಸಾದ್ಯವಾಗಿಲ್ಲ. 

ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ವಿಶ್ವಕರ್ಮ ಅಭಿವೃದ್ದಿ ನಿಗಮ ಸ್ಥಾಪಿಸಲು ಬಲವಾದ ಒತ್ತಡ ಹಾಕಿದೆ. ಪರಿಣಾಮ ನಿಮಗವೇನೋ ಆರಂಭವಾಯಿತು.

ಆದರೆ ಕಳೆದ ಐದು ವರ್ಷದಿಂದ ಆ ನಿಗಮಕ್ಕೆ ನಯಾಪೈಸೆ ಬಿಡುಗಡೆ ಮಾಡಲಾಗಲಿಲ್ಲ. ಆದರೆ ಪ್ರಧಾನಿ ಮೋದಿ ಚಂಡೀಘಡ್ ನಲ್ಲಿ ವಿಶ್ವಕರ್ಮ ಸಮಾಜದ ವಿಶ್ವವಿದ್ಯಾನಿಯಲಯ ತೆರೆದರು. ಹಾಗಾಗಿ ದೇಶಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದರು.

ಎಂಎನ್ ಸಿ ಕಂಪನಿಗಳು ದಾಳಿಗೆ ನಾವು ಸಹ ತತ್ತರಿಸಿ ಹೋಗಿದ್ದೇವೆ. ಅವರು ಕೊಡುವ ದರಕ್ಕೆ ನಾವು ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಣ್ಣಪುಟ್ಟ ಅಂಗಡಿಯವರು ನಿರುದ್ಯೋಗಿಗಳಾಗಿದ್ದಾರೆ. ಈಗಿನ ತಂತ್ರಜ್ಞಾನಕ್ಕೆ ಸ್ಪಂಧಿಸಲು ಸಾಧ್ಯವಾಗಿಲ್ಲವೆಂದರು.

ಹಾಗಾಗಿ ಹಿಂದುಳಿದ ಸಮಾಜದ ವಸತಿ ನಿಲಯಗಳಲ್ಲಿ ಕುಲಕಸುಬಿವಿನ ತರಬೇತಿ ಕೇಂದ್ರ ತೆರೆಯಬೇಕೆಂದು ನಮ್ಮ ಪಕ್ಷಕ್ಕೆ ಒತ್ತಾಯಿಸಿದ್ದೇನೆ ಎಂದರು.

724