ಮೆಗ್ಗಾನ್ ನಲ್ಲಿ ಅದೇ ಗಲಾಟೆ-ಅದೇ ಪರಿಸ್ಥಿತಿ!

ಮೆಗ್ಗಾನ್ ನಲ್ಲಿ ಅದೇ ಗಲಾಟೆ-ಅದೇ ಪರಿಸ್ಥಿತಿ!

ಲೈವ್ ಸುದ್ದಿ.ಕಾಂ|ಶಿವಮೊಗ್ಗ

ಮೆಗ್ಗಾನ್ ಆಸ್ಪತ್ರೆಯಲ್ಲಿ ಯಾವ ಸುಧಾರಣೆಯೂ ಆಗೊಲ್ಲವೆಂಬುದಕ್ಕೆ ಈ ಪ್ರಕರಣ ಕೈಗನ್ನಡಿ ಆಗಿದೆ ಎಂದು ಹೇಳಬಹುದಾಗಿದೆ.

ಹೊಸ್ಮನೆ ನಿವಾಸಿ ದುರ್ಗಪ್ಪವೆಂಬುವರು(42) ಅಸಿಡಿಟಿ ನಿಂದ ಬಳಲುತ್ತಿದ್ದು ಬೆಳಿಗ್ಗೆ 7-30 ರ ಸಮಯದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಬಂದು ವೈದ್ಯರನ್ನ ಸಂಪರ್ಕಿಸಿದ್ದಾರೆ.

ತಪಾಸಣೆ ನಡೆಸಿದ ವೈದ್ಯ ಮಂಜುನಾಥ್ ತೊಂದರೆ ಏನಿಲ್ಲವೆಂದು ತಿಳಿಸಿ ಮಾತ್ರೆ ಬರೆದು ಡಿಸ್ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಮನೆಗೆ ಹೋದ ದುರ್ಗಪ್ಪ ಸಾವನ್ನಪ್ಪಿದ್ದಾರೆ. 

ಆಕ್ರೋಶಗೊಂಡ ದುರ್ಗಪ್ಪನವರ ಕುಟುಂಬ ಹಾಗೂ ಸ್ನೇಹಿತರು ಮೆಗ್ಗಾನ್ ಆಸ್ಪತ್ರೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ದುರ್ಗಪ್ಪ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ವೈದ್ಯರನ್ನ ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. 

ನಂತರ ಮೆಗ್ಗಾನ್ ಅಧಿವೀಕ್ಷಕ ಪ್ರೊ.ವಿರೂಪಾಕ್ಷಪ್ಪ ಸೇರಿದಂತೆ ಉನ್ನತ ಅಧಿಕಾರಿಗಳು ಕುಟುಂಬಸ್ಥರ ಜೊತೆ ಸಭೆ ನಡೆಸಿ ತನಿಖೆ ನಡೆಸಿ ವೈದ್ಯರ ತಪ್ಪು ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆಯ ಮೇಲೆ ಕುಟುಂಬಸ್ಥರು ಶಾಂತರಾಗಿದ್ದಾರೆ.