ಎಸ್ಎಸ್ ಎಲ್ ಸಿ ಮಕ್ಕಳ ತಲೆಮೇಲೆ ಕೈ ಇಟ್ಟು ಬೆಸ್ಟ್ ಆಫ್ ಲಕ್ ಹೇಳಿದ ಈಶ್ವರಪ್ಪ

ಎಸ್ಎಸ್ ಎಲ್ ಸಿ ಮಕ್ಕಳ ತಲೆಮೇಲೆ ಕೈ ಇಟ್ಟು ಬೆಸ್ಟ್ ಆಫ್ ಲಕ್ ಹೇಳಿದ ಈಶ್ವರಪ್ಪ

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ಶಿವಮೊಗ್ಗದಲ್ಲಿ ನಡೆಯುತ್ತಿರುವ ಎಸ್ಎಸ್ಎಲ್ ಸಿ ಪರೀಕ್ಷೆ ಕೇಂದ್ರಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಜಿಪಂ ಸಿಇಒ ವೈಶಾಲಿ, ಡಿಡಿಪಿಐ ರಮೇಶ್ ಭೇಟಿ ನೀಡಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.

ನಗರದ ಕಸ್ತೂರ ಬಾ ಶಾಲೆ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಗೆ ಭೇಟಿ ನೀಡಿದ ಸಚಿವರ ತಂಡ ಪರೀಕ್ಷ ಕೇಂದ್ರದ ವ್ಯವಸ್ಥೆ, ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯದ ಬಗ್ಗೆ ವಿಚಾರಿಸಿ ಧೈರ್ಯ ತುಂಬಿದರು. 

ಎರಡೂ ಪರೀಕ್ಷೆಯ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳಿಗೆ ಶುಭಕೋರಿದ ಸಚಿವರು ನಾನು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವೇಳೆ ನನಗೆ ಗಣಿತ ಎಂದರೆ ಕಬ್ಬಿಣದ ಕಡ್ಲೆಯಾಗಿತ್ತು. ನಿಮಗೆ ಹೇಗೆ ಅನಿಸುತ್ತಿದೆ ಎಂದು ವಿಚಾರಿಸಿದರು. ನನಗೆ ಭಯವಿಲ್ಲವೆಂದು ಉತ್ತರದಿಂದ ಖುಷಿಯಾದರು.

ನಂತರ ಮಕ್ಕಳ ತಲೆ ಮೇಲೆ ಕೈಯಿಟ್ಟು ಪರೀಕ್ಷೆ ಚೆನ್ನಾಗಿ ಮಾಡಿ ಶುಭವಾಗಲಿ ಎಂದುವಾಶೀಸಿದರು.

270