ಜನರ ಬೇಜವಬ್ದಾರಿತನದಿಂದ ಕೊರೋನ ಹೆಚ್ಚು-ಈಶ್ವರಪ್ಪ!

ಜನರ ಬೇಜವಬ್ದಾರಿತನದಿಂದ ಕೊರೋನ ಹೆಚ್ಚು-ಈಶ್ವರಪ್ಪ!

ಲೈವ್ ಸುದ್ದಿ.ಕಾಂ|ಶಿವಮೊಗ್ಗ

ಜನರ ಬೇಜವಬ್ದಾರಿತನದಿಂದಾಗಿ ಜಿಲ್ಲೆಯಲ್ಲಿ ಕೊರೋನ ಸೋಂಕು ದಿನ ದಿನೆ ಹೆಚ್ಚಾಗುತ್ತಿದೆ ಎಂದು ಸಚಿವ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿ ಕೋವಿಡ್-19 ಕುರಿತು ಸಾಕಷ್ಟು ಬಾರಿ ಜಿಲ್ಲಾಡಳಿತ ಮತ್ತು ಸರ್ಕಾರ ಗುಂಪಾಗಿರಬೇಡಿ ಎಂದರೂ ದಿನೆ ದಿನೆ ಜನರ ಗುಂಪು ಹೆಚ್ಚಾಗುತ್ತಿದೆ.

ಹತ್ತಾರು ಬಾರಿ ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿಕೊಂಡಿದೆ ಜನ ಕೇಳ್ತಾ ಇಲ್ಲ. ಜನರ ಬೇಜವಬ್ದಾರಿತನದಿಂದ ವೈರಸ್ ಹೆಚ್ಚಾಗುತ್ತಿದೆ. ಜನ ತಮಗೆ ಸೋಂಕು ತಗುಲಿಸಿಕೊಳ್ಳುವ ಮೂಲಕ ಕುಟುಂಬಕ್ಕೆ, ತಮ್ಮ ಸುತ್ತಮುತ್ತಲಿನ ಮನೆಗಳಿಗೆ ಹಂಚುತ್ತಿದ್ದಾರೆ. 

ಜಿಲ್ಲಾಡಳಿತ ವೈರಸ್ ತಡೆಗಟ್ಟಲು ಅತಿಯಾಗಿ ಶ್ರಮವಹಿಸಿದರೂ ಸಹ ವೈಸ್ ಹೆಚ್ಚಾಗುತ್ತಿದೆ. ಜನ ಜವಬ್ದಾರಿಯುತವಾಗಿ ನಡೆದುಕೊಂಡರೆ ಮಾತ್ರ ಸೋಂಕು ತಡೆಗಟ್ಟಬಹುದು ಎಂದು ಹೇಳಿದರು.

ಶರಾವತಿ ನದಿ ನೀರನ್ನ ಬೆಂಗಳೂರಿಗೆ ಕಳುಹಿಸೊಲ್ಲ

ಶರಾವತಿ ನೀರನ್ನ ಬೆಂಗಳೂರಿಗೆ ಕಳುಹಿಸೊಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. 

ಅಲ್ಲಿ ಭೂಗರ್ಭ ವಿದ್ಯುತ್ ನಡೆಸುವ ಕಾರ್ಯವನ್ನ ನಡೆಸದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಡಲಿದ್ದು ಈಗ ಕೋವಿಡ್-19 ನ್ನ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು

 

302