ಶರಾವತಿ ಉಗಮ ಸ್ಥಾನದ ಅಭಿವೃದ್ಧಿಗೆ ತ್ರಿಮೂರ್ತಿಗಳಿಂದ ಚಾಲನೆ!

ಶರಾವತಿ ಉಗಮ ಸ್ಥಾನದ ಅಭಿವೃದ್ಧಿಗೆ ತ್ರಿಮೂರ್ತಿಗಳಿಂದ ಚಾಲನೆ!

ಲೈವ್ ಸುದ್ದಿ.ಕಾಂ|ಶಿವಮೊಗ್ಗ

ತೀರ್ಥಹಳ್ಳಿಯಲ್ಲಿರುವ ಶರಾವತಿ ಉಗಮ ಸ್ಥಾನದ ಅಭಿವೃದ್ಧಿಗೆ ತ್ರಿಮೂರ್ತಿ ಮಂತ್ರಿಗಳಿಂದ ಚಾಲನೆ ನೀಡಿದ್ದಾರೆ.

ಕೋಟ್ಯಾಂರ ರೂ.ಹಣದಲ್ಲಿ  ಕಾವೇರಿಯ ಉಗಮ ಸ್ಥಾನವನ್ನ ಹೇಗೆ ಅಭಿವೃದ್ಧಿ ಪಡಿಸಲಾಗಿದೆಯೋ ಅದೇ ರೀತಿ ಅಂಬುತೀರ್ಥವನ್ನ ಅಭಿವೃದ್ಧಿ ಪಡಿಸಲು ಸಂಕಲ್ಪ ಮಾಡಲಾಗಿದೆ.

ಪಂಚಾಯತ್ ರಾಜ್, ಮುಜರಾಯಿ ಇಲಾಖೆ, ಸಹ್ಯಾದ್ರಿ ಪಾರಂಪರಿಕ ಪ್ರಾಧಿಕಾರ, ತುಂಗಾ ಮೇಲ್ದಂಡೆ ನೀರಾವರಿ ಇಲಾಖೆಯ ಸಹಾತದಲ್ಲಿ ಅಭಿವೃದ್ಧಿಗೆ ಚಾಲನನೀಡಲಾಗಿದೆ.

10 ರಿಂದ 15 ಕೋಟಿಯಲ್ಲಿ ಪುಷ್ಕರಣಿ ಅಭಿವೃದ್ಧಿ, ಅಂಬುತೀರ್ಥ ಕೆರೆ ಸುತ್ತಲೂ ಬದುಗೋಡೆ, ವಾಕಿಂಗ್ ಪಾಥ್,  ನದುಯ ಹಿಂಭಾಗದ ತಡೆಗೋಡೆ ನಿರ್ಮಾಣ ಸಮುದಾಯ ಭವನ ಹೀಗೆ ವಿವಿಧ ಕಾಮಗಾರಿಗಳಿಗೆ ಸಚಿವರಾದ ಶ್ರೀನಿವಾಸ ಪೂಜಾರಿ, ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ಮೊದಲಿಗೆ ರಾಮೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ಸಚಿವರು, ನಂತರ ಹೊರಗಡೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯ ಕಲ್ಲಿಗೆ ಪೂಜೆ ಸಲ್ಲಿಸಿ ನೆರವೇರಿಸಿದರು.

 

272