ಶಿವಮೊಗ್ಗದಲ್ಲಿ ಸೀಲ್ ಡೌನ್ ಗಳ ಸುಗ್ಗಿ-ಗೋಪಾಲಗೌಡ, ಬಸವನಗುಡಿ ಹಾಗೂ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಸುತ್ತಮುತ್ತ ಸೀಲ್ ಡೌನ್!

ಶಿವಮೊಗ್ಗದಲ್ಲಿ ಸೀಲ್ ಡೌನ್ ಗಳ ಸುಗ್ಗಿ-ಗೋಪಾಲಗೌಡ, ಬಸವನಗುಡಿ ಹಾಗೂ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಸುತ್ತಮುತ್ತ ಸೀಲ್ ಡೌನ್

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ಶಿವಮೊಗ್ಗದಲ್ಲಿ ಸೀಲ್ ಡೌನ್ ಗಳ ಸುಗ್ಗಿ ಆರಂಭವಾಗಿದೆ. ಕೊರೋನ ಪಾಸಿಟವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತೆ ಮೂರು ಏರಿಯಾವನ್ನ ಇಂದು ಸೀಲ್ ಡೌನ್ ಮಾಡಲಾಗಿದೆ. ಸಧ್ಯದಲ್ಲಿಯೇ ಶಂಕರ ಕಣ್ಣಿನ ಆಸ್ಪತ್ರೆ ಸೀಲ್ ಡೌನ್ ಅಥವಾ ಎರಡು ಮೂರು ದಿನ ಬಂದ್ ಮಾಡುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.

ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರಿಗೆ ಈಗ ಸೋಂಕು ಕಾಣಿಸಿಕೊಂಡಿರುವುದು ತಿಳಿದುಬಂದಿದೆ.  ಸಮುದಾಯದ ಒಳಗೆ ಕೊರೋನ ವೈರಸ್ ಹರಡಲು ಆರಂಭಗೊಂಡಿದೆ ಎಂಬ ಅನುಮಾನಗಳು ಹೆಚ್ಚುತ್ತಿವೆ. ಗೋಪಾಲ ಗೌಡ ಡಿ ಬ್ಲಾಕ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಎದುರುಗಡೆ ಏರಿಯಾ ಹಾಗೂ ಬಸವನಗುಡಿ ಕ್ವಾಟ್ರಸ್ ಸೀಲ್ ಡೌನ್ ಮಾಡಲಾಗಿದೆ. ಈ ಏರಿಯಾದ 100 ಮೀಟರ್ ಸೀಲ್ ಡೌನ್ ಮಾಡಲಾಗುತ್ತಿದೆ.  

ಈ ವೈದ್ಯರುಗಳಿಗೆ ಟ್ರಾವೆಲ್ ಹಿಸ್ಟರಿ ಇರುವುದು ಕಂಡುಬರುತ್ತಿಲ್ಲ. ವೈದ್ಯರೆಲ್ಲರೂ ಸಹ ಗ್ಲೌಸ್ ಹಾಗೂ ಮಾಸ್ಕ್ ಧರಿಸಿ ರೋಗಿಗಳನ್ನ ತಪಾಸಣೆ ಮಾಡಿರುತ್ತಾರೆ. ಆದರೂ ಇವರಿಗೆ ಸೋಂಕು ಹತ್ತಿರುವುದು ಕಂಡುಬರುತ್ತಿದೆ. ಇನ್ನೇರಡು ದಿನಗಳಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಸೀಲ್ ಡೌನ್ ಮಾಡುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಆಸ್ಪತ್ರೆಯ ರೋಗಿಯಿಂದ ಇವರಿಗೆ ಕೊರೋನ ಪಾಸಿಟಿವ್ ಬಂದಿದೆ ಎಂದಾದರೆ ಆ ರೋಗಿಯ ಯಾರು? ಯಾವ ಊರು ಎಂದು ಪತ್ತೆಹಚ್ಚಲಾಗಿದೆಯಾ? ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟೀಕರಣ ನೀಡಬೇಕಿದೆ. ಈ ಕೆಲಸವನ್ನ ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ.  

ಮಹಿಳಾ ಪಾಲಿಟಿಕ್ನಿಕ್ ಕಾಲೇಜಿನ ಎದರಿನ ಮನೆ ಸೀಲ್ ಡೌನ್

ಇಲ್ಲಿನ ಸ್ವಾಮಿ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಎದುರಿನ ಮನೆಯಲ್ಲಿ ಮಹಿಳೆಯೋರ್ವರಿಗೆ ಕೊರೋನ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಪ್ರದೇಶವನ್ನೂ ಸಹ ಸೀಲ್ ಡೌನ್ ಮಾಡಲಾಗುತ್ತಿದೆ.

ಬಸವನಗುಡಿ ಕ್ವಾಟ್ರಸ್ ನ ಮನೆ ಸೀಲ್ ಡೌನ್!

ಬಸವನಗುಡಿ ಸಿಡಿಪಿಒ ಕಚೇರಿಯಿರುವ ಕ್ವಾಟ್ರಸ್ ನಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ಕ್ವಾಟ್ರಸ್ ನ ನೂರು ಮೀಟರ್ ಸೀಲ್ ಡೌನ್ ಮಾಡಲಾಗಿದೆ. ಸಂಬಂಧಿಕರು ಬೆಂಗಳೂರಿನಿಂದ ಬಂದು ಹೋದ ಕಾರಣ ಇವರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

2493