ಸುಗುಣ ಫೀಡಿಂಗ್ ಫ್ಯಾಕ್ಟರಿಗೆ ಬಿಹಾರಿ ಕಾರ್ಮಿಕರು?-ಸಹಾಯವಾಣಿಗೆ ಮಾಹಿತಿ ನೀಡಿದರೂ ಮೌನ ವಹಿಸಿರುವುದೇಕೆ?

ಸುಗುಣ ಫೀಡಿಂಗ್ ಫ್ಯಾಕ್ಟರಿಗೆ ಬಿಹಾರಿ ಕಾರ್ಮಿಕರು?-ಸಹಾಯವಾಣಿಗೆ ಮಾಹಿತಿ ನೀಡಿದರೂ ಮೌನ ವಹಿಸಿರುವುದೇಕೆ?

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ಜಿಲ್ಲೆಯಲ್ಲಿ ಕೊರೋನ ವೈರಸ್ ಹರಡಲು ಜನರ ಬೇಜವಬ್ದಾರಿ ಕಾರಣ ಎಂದು ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾಡಳಿತ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಹೇಳುವ ಸಚಿವರಿಗೆ ಶಿವಮೊಗ್ಗ ತಾಲೂಕಿನ ಮಾಚೇನ ಹಳ್ಳಿಯ ಕೈಗಾರಿಕಾ ಪ್ರದೇಶದ ಜನರ ಕೂಗು ಕೇಳಿದರೆ ಬಹುಶಃ ತಮ್ಮ ಮಾತು ಬದಲಾಯಿಸಿಕೊಳ್ಳಬಹುದು ಅಂತ ಅನಿಸುತ್ತದೆ.

ಜಿಲ್ಲಾಡಳಿತ ಕೊರೋನ ವೈರಸ್ ಹರಡದಂತೆ ತಡೆಗಟ್ಟಲು ಶ್ರಮಪಡುತ್ತಿದ್ದಾರೆ. ಜನ ಬೇಜವಬ್ದಾರಿತನದಿಂದ ಕೊರೋನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ  ಎಂದು ಹೇಳುವ ಸಚಿವರಿಗೆ ಬಹುಶಃ ತಮ್ಮ ಜಿಲ್ಲೆಯ ಜನತೆಯ ಮೇಲೆ ವಿಶ್ವಾಸವಿಲ್ಲವೆಂದೆನಿಸುತ್ತದೆ. ವ್ಯವಹಾರಗಳನ್ನ ಕಂಡುಕೊಳ್ಳದ ಜನ ಪರದಾಡುತ್ತಿದ್ದಾರೆ. ಕೊರೋನ ಪಾಸಿಟಿವ್ ಜಿಲ್ಲೆಯಲ್ಲಿ ತಾಂಡವಾಡುತ್ತಿದೆ. ಮಾಸ್ಕ್ ಧರಿಸಿಯೇ ಜನ ಹೊರಗಡೆ ಬರುತ್ತಿದ್ದಾರೆ. ಸಾಮಾಜಿಕ ಅಂತರವನ್ನ ಬಹುಶಃ ಇವರೇ ಹಾಗೂ ಅಧಿಕಾರಿಗಳ ವರ್ಗ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದರೆ ಸಚಿವರಿಗೆ ಬಹುಶಃ ಕೋಪ ಬರಬಹುದು.

ಇಷ್ಟೊಂದು ಕಠೋರವಾಗಿ ಹೇಳಲು ಇಲ್ಲೊಂದು ಬಲವಾದ ಉದಾಹರಣೆ ಇದೆ. ಮಾಚೇನ ಹಳ್ಳಿಯ ಕೈಗಾರಿಕಾ ಪ್ರದೇಶದ ಸುಗುಣ ಫುಡ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಗೆ ಬಿಹಾರದಿಂದ 12 ಜನ ಕಾರ್ಮಿಕರು ಬಂದಿದ್ದಾರೆ. ಇವರು ಕದ್ದುಮುಚ್ಚಿ ಲಾರಿಯಲ್ಲಿ  ಬಂದಿರುವುದಾಗಿ ಗ್ರಾಮಸ್ಥರು ದೂರುತ್ತಿದ್ದಾರೆ. ಇವರು ಬಂದಿರುವ ಬಗ್ಗೆ ಕೊರೋನ ಸಹಾಯವಾಣಿ 08182-221010 ಗೆ ಗ್ರಾಮಸ್ಥರೋರ್ವರು ಎರಡು ಮೂರು ದಿನಗಳಿಂದ ದೂರು ನೀಡುತ್ತಿದ್ದಾರೆ. 15 ಬಾರಿ ಸಹಾಯವಾಣಿಗೆ ತಿಳಿಸಿದ್ದರೂ ಸಹ ಜಿಲ್ಲಾಡಳಿತದಿಂದ ಯಾವ ಕ್ರಮ ಜರುಗುತ್ತಿದೆ?

ಗ್ರಾಮದ ಕ್ಯಾಂಟೀನ್ ವೊಂದಕ್ಕೆ  ಈ ಕಾರ್ಮಿಕರು ಬರುತ್ತಾರೆ ಎಂಬುದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮಸ್ಥರು ಸಹ ಈ ಕ್ಯಾಂಟೀನ್ ಗೆ  ಬರುತ್ತಾರೆ. ಇವರುಗಳು ಎರಡು ಮೂರು ದಿನಗಳ ಹಿಂದೆ ಬಂದಿರಬಹುದು ಎಂಬುದು ಗ್ರಾಮಸ್ಥರು ದೂರು ನೀಡಿದರೆ ನೋಡುತ್ತೇನೆ ಎಂದು ಹೇಳು ಸಹಾಯವಾಣಿಯವರು ಮುಂದಿನ ಕ್ರಮ ತೆಗೆದುಕೊಳ್ಳುವುದರಲ್ಲಿ ವಿಫಲವಾಗಿದ್ದಾರೆ. ಈ ಬೇಜವಬ್ದಾರಿ ಯಾರದ್ದು ಹಾಗಾದರೆ? ಸ್ಥಳಕ್ಕೆ ಪೊಲೀಸ್ ರು ಮತ್ತು ಆರೋಗ್ಯಇಲಾಖೆಯವರು ಭೇಟಿ ನೀಡಿ ಪರಿಶೀಲಿಸುವುದನ್ನ ಬಿಟ್ಟು, ಜನರ ಮೇಲೆ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ? ಈಗಾಗಲೇ ಮಹಾರಾಷ್ಟ್ರದಿಂದ ಬಂದ ಶಾಹಿ ಗಾರ್ಮೆಂಟ್ಸ್ ನ ಕಾರ್ಮಿಕರಿಗೆ ಸೋಂಕು ತಗುಲಿದೆ.

456