ಸುರಭಿ ವ್ಯಸನ ಮುಕ್ತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ

ಸುರಭಿ ವ್ಯಸನ ಮುಕ್ತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ನಗರದ ಸೋಮಿನಕೊಪ್ಪದ ಆಟೋ ಕಾಲೋನಿಯಲ್ಲಿರುವ ಸುರಭಿ ವ್ಯಸನ ಮುಕ್ತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಾಧಕ ವಸ್ತುಗಳ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿನಗಳನ್ನ ಆಚರಿಸಲಾಯಿತು.

ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆದ ಸರಳ ಕಾರ್ಯಕ್ರಮವನ್ನ ಸಂಸ್ಥೆಯ ಫಲಾನುಭವಿಗಳಿಂದ ಉದ್ಘಾಟಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಯೋಜನಾ ನಿರ್ದೇಶಕ ಮಾತನಾಡಿ ಯುವ ಪೀಳಿಗೆಯವರು ವ್ಯಸನಕ್ಕೆ ಬಲಿಯಾಗಬಾರದು, ವ್ಯಸನಕ್ಕೆ ಬಲಿಯಾಗುವ ಮೂಲಕ ಆರೋಗ್ಯ ಮತ್ತು ಜೀವನವನ್ನ ಹಾಳು ಮಾಡಿಕೊಳ್ಳದಂತೆ ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಜಿಪಂ ಮಾಜಿ ಸದಸ್ಯ ಕೇಶ್ವರಪ್ಪ, ವಕೀಲರಾದ ನಾಗರಾಜ್ ಆಗಮಿಸಿದ್ದರು. ದೇವರಾಜ್ ನಿರೂಪಿಸಿದರು. ಕು.ಮಾನಸ ಸ್ವಾಗತವನ್ನ ಕೋರಿದರು.ಹಾಲೇಶ್ ವಂದಿಸಿದರು.

364