ಗ್ರಾಪಂ ಆಡಳಿತ ಸಮಿತಿ ರಚನೆ ಕುರಿತು ಸಿಎಂ ಕ್ಷೇತ್ರದಲ್ಲಿಯೇ ಅಪಸ್ವರ-ಕಾನೂನಾತ್ಮಕ ಹೋರಾಟಕ್ಕೆ ಸಜ್ಜು!

ಗ್ರಾಪಂ ಆಡಳಿತ ಸಮಿತಿ ರಚನೆ ಕುರಿತು ಸಿಎಂ ಕ್ಷೇತ್ರದಲ್ಲಿಯೇ ಅಪಸ್ವರ-ಕಾನೂನಾತ್ಮಕ ಹೋರಾಟಕ್ಕೆ ಸಜ್ಜು!

ಲೈವ್ ಸುದ್ದಿ.ಕಾಂ/ಶಿವಮೊಗ್ಗ

6012 ಗ್ರಾಮಪಂಚಾಯಿತಿಯ ಚುನಾವಣೆಯನ್ನ 6 ತಿಂಗಳ ವರೆಗೆ ಮುಂದೂಡಿ ಆಡಳಿತ ಸಮಿತಿಯನ್ನ ರಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವಂತೆ ತೀರ್ಮಾನ ನಡೆಸಿದ ಸಚಿವ ಸಂಪುಟದ ವಿರುದ್ಧ ಸಿಎಂ ಕ್ಷೇತ್ರ ಶಿವಮೊಗ್ಗ ಜಿಲ್ಲೆಯಲ್ಲಿಯೇ ಅಪಸ್ವರ ಮೂಡಿದೆ.

ಜಿಲ್ಲೆಯಲ್ಲಿ 271 ಗ್ರಾಪಂ ಕ್ಷೇತ್ರಗಳಿದ್ದು ಇದಕ್ಕೆ ಜಿಲ್ಲಾಡಳಿತದ ನೇತೃತ್ವದಲ್ಲಿ ಆಡಳಿತ ಸಮಿತಿಯನ್ನ ರಚಿಸಲು ಮೊನ್ನೆ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಈ ಕುರಿತು ಸಿಎಂ ಕ್ಷೇತ್ರದ ಶಿವಮೊಗ್ಗ ಜಿಲ್ಲೆಗಳಾದ ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ಆಕ್ಷೇಪಣೆ ವ್ಯಕ್ತವಾಗಿವೆ.

ಹೊಸನಗರ ತಾಲೂಕಿನ 30 ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಒಕ್ಕೂಟವು ಇತ್ತೀಚೆಗೆ ಸಭೆ ನಡೆಸಿ ಈಗಿರುವ ಸದಸ್ಯರನ್ನೇ ಮುಂದೂಡುವಂತೆ ಒತ್ತಾಯಿಸಲಾಗಿದೆ. ಆಡಳಿತ ಸಮಿತಿಯನ್ನ ರಚಿಸಿದರೆ ಕೋರ್ಟ್ ಮೆಟ್ಟಿಲು ಏರುವ ನಿರ್ಧಾರಕ್ಕೆ ಒಕ್ಕೂಟ ಬಂದಿದೆ. ಅದರಂತೆ ತೀರ್ಥಹಳ್ಳಿಯಲ್ಲಿ ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಿದ್ದು ತಮ್ಮನ್ನೇ ಮುಂದುವರೆಸುವಂತೆ ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಗ್ರಾಪಂ ಚುನಾವಣೆಯ ಮೇಲೆ ಕೊರೋನ ಕರಿಛಾಯೆ ಮುಂದುವರೆದಿದ್ದು ಕರಿನೆರಳಿನ ಮಧ್ಯೆ ಆಕ್ಷೇಪಣೆಗಳು, ಒತ್ತಾಯಗಳು ಆಗ್ರಹಗಳು ಮೇಲೇಳುತ್ತಿವೆ. ನ್ಯಾಯಾಲಯದ ಮೆಟ್ಟಿಲು ಏರುವ ಮೂಲಕ ಕಾನೂನಾತ್ಮಕ ಹೋರಾಟಕ್ಕೂ ಇಳಿಯಲಿದ್ದಾರೆ. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗುತ್ತಾ ಅಥವಾ ಯಶಸ್ವಿಯಾಗುತ್ತಾ ಎಂಬುದನ್ನ ಕಾದುಕಾಯಬೇಕಿದೆ.

340